Jump to content
സഹായം

"ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 63: വരി 63:
== Hരിത്രം (ಇತಿಹಾಸ) ==
== Hരിത്രം (ಇತಿಹಾಸ) ==


ಕಜಂಪಾಡಿಯ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯು ಈ ಊರಿನ ಕೆಲವು ವಿದ್ಯಾಭಿಮಾನಿಗಳ ಕನಸಿನ ಕೂಸಾಗಿ ೧೯೩೫ ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟಿತು. ಆರಂಭಿಕ ಹಂತದಲ್ಲಿ ಮುಳಿಹುಲ್ಲಿನ ಮಾಡಿನ ಕಟ್ಟಡದಲ್ಲಿ ಆರಂಭವಾದ ಕಲಿಕಾ ಪ್ರಕ್ರಿಯೆಯು ಹರಿಜನ ವೆಲ್ಫೇರ್ ಶಾಲೆ ಎಂದೂ ಬಳಿಕ ಸರಕಾರಿ ವೆಲ್ಫೇರ್ ಶಾಲೆಯಾಗಿಯೂ, ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಈ ಸಾಕಷ್ಟು ತರಗತಿ ಕೋಣೆಗಳು ಹಾಗೂ ಕಟ್ಟಡಗಳನ್ನು ಒಳಗೊಂಡ ಸುಸಜ್ಜಿತ ವಿದ್ಯಾಲಯವಾಗಿ ಬೆಳೆದು ನಿಂತಿದೆ. ಸರಿ ಸುಮಾರು ಒಂಭತ್ತು ದಶಕಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದು ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಕಜಂಪಾಡಿ ಪ್ರದೇಶದ ಬಗ್ಗೆ ಹೇಳುವುದಾದರೆ, ಇದೊಂದು ತೀರಾ ವಿರಳ ಜನಸಂಖ್ಯೆಯಿರುವ ಪ್ರದೇಶವಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಇಲ್ಲದಿರುವುದು ಬೇಸರದ ಸಂಗತಿ. ಇಲ್ಲಿನ ಜನರು ಸರಕಾರಿ ಸೇವೆಗಳನ್ನು ಪಡೆಯಲು ಮತ್ತು ಸಾರ್ವಜನಿಕ ಕಾರ್ಯಗಳಿಗೆ ಇಲ್ಲಿಂದ ಸುಮಾರು ಎಂಟು ಕಿಲೋಮೀಟರ್ ದೂರವಿರುವ ಪೆರ್ಲಕ್ಕೆ ಹೋಗಬೇಕು. ಅಂತಹ ಹಲವು ಕೊರತೆಗಳೆಡೆಯಲ್ಲಿ ಈ ಪ್ರದೇಶದ ಪುಟಾಣಿ ಮಕ್ಕಳಿಗೆ ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವ ರೀತಿಯಲ್ಲಿ ನಮ್ಮೀ ವಿದ್ಯಾಲಯವು ಒಂದು ವರದಾನವೆಂದೇ ಹೇಳಬಹುದು.
ಶಾಲಾರಂಭದಿಂದ ತೊಡಗಿ ಇದುವರೆಗೆ ಈ ಊರಿನ ಹಾಗೂ ಪರವೂರಿನ ಹತ್ತಾರು ಅಧ್ಯಾಪಕರು ನಮ್ಮೀ ವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪನ ಸೇವೆ ಸಲ್ಲಿಸಿ ಊರ ವಿದ್ಯಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಒಟ್ಟಿನಲ್ಲಿ ಕಜಂಪಾಡಿ ಶಾಲೆಯು ಈ ಪ್ರದೇಶದ ಜನರಿಗೆ ಅಚ್ಚುಮೆಚ್ಚಿನ ಸಾರ್ವಜನಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂಬುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ.


== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
====== ಪ್ರಸ್ತುತ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿರುವ ಭೌತಿಕ ಸೌಕರ್ಯಗಳು ======
೧. ಸುಸಜ್ಜಿತ ತರಗತಿ ಕೋಣೆಗಳು
ತರಗತಿ ಕೋಣೆಗಳ ಗೋಡೆಗಳು ಪಠ್ಯಸಂಬಂಧೀ ಚಿತ್ರಗಳಿಂದ ಕೂಡಿದ್ದು, ನೆಲಕ್ಕೆ ಟೈಲ್ಸ್ ಹಾಸಲಾಗಿದೆ. ಹಂಚಿನ ಮಾಡಿನ ಒಳಭಾಗದಲ್ಲಿ ಸೀಲಿಂಗ್ ವ್ಯವಸ್ಥೆಯಿದೆ. ಪ್ರತಿಯೊಂದು ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆಯಿದೆ. ಕರಿಹಲಗೆ, ತರಗತಿ ಗ್ರಂಥಾಲಯಕ್ಕೆ ಕಪಾಟು, ಗೋದ್ರೇಜ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ.
೨. ಶಾಲಾ ವಾಹನ
ಶಾಸಕರ ನಿಧಿಯಿಂದ ಶಾಲಾ ವಾಹನವು ಲಭಿಸಿದ್ದು, ಶಾಲೆಯ ಅಸುಪಾಸಿನ ಪ್ರದೇಶಗಳಾದ ಪೆರಿಯಾಲ್, ನೆಲ್ಲಿಕುಂಜೆ, ಪುತ್ರಕ್ಕಳ ಭಾಗದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.
೩. ಮಧ್ಯಾಹ್ನದ ಊಟದ ಹಾಲ್
ಪಂಚಾಯತಿನಿಂದ ಶಾಲೆಗೆ ಮಕ್ಕಳ ಊಟದ ವ್ಯವಸ್ಥೆಗೆ ಅಗತ್ಯವಿರುವ ವಿಶಾಲವಾದ ಹಾಗೂ ಸಾಕಷ್ಟು ಗಾಳಿ ಬೆಳಕು ಇರುವ ಊಟದ ಕೊಠಡಿಯ ವ್ಯವಸ್ಥೆಯಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಾಕಷ್ಟು ಸ್ಥಳಾವಕಾಶದಲ್ಲಿ ಕುಳಿತು ಊಟ ಮಾಡಲು ಪ್ರಯೋಜನಕಾರಿಯಾಗಿದೆ.
೪. ಜೈವ ವೈವಿಧ್ಯ ಉದ್ಯಾನ


೫. ಸೀಸೋ, ಉಯ್ಯಾಲೆ ಇತ್ಯಾದಿ ಆಟೋಪಕರಣಗಳು


== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
18

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1578197" എന്ന താളിൽനിന്ന് ശേഖരിച്ചത്