ജി. എച്ച്. എസ്. എസ്. ബന്തടുക്ക/അക്ഷരവൃക്ഷം/ ಕರ್ತವ್ಯ

Schoolwiki സംരംഭത്തിൽ നിന്ന്
ಕರ್ತವ್ಯ

ಈ ಜಗತ್ತಿನಲ್ಲಿರುವ ಬಹುತೇಕ ತಂದೆ ತಾಯಿಯರ ಬಾಳಿನಲ್ಲಿ ಅತ್ಯಂತ ಸಂತೋಷದ ಕ್ಷಣವೇ ತಮ್ಮ ಮಕ್ಕಳ ಜೊತೆಗೆ ಕಾಲಕಳೆಯುವುದಾಗಿದೆ. ಮಕ್ಕಳನ್ನು ಪ್ರೀತಿಯಿಂದಲೂ ಕಾಳಜಿಯಿಂದಲೂ ಸಾಕಿ ಸಲಹಿ ಅವರಿಗೆ ವಿದ್ಯಾಭ್ಯಾಸವನ್ನು ಜೊತೆಗೆ ಒಳ್ಳೆಯ ಸ್ವಭಾವನ್ನೂ ಸಂಸ್ಕೃತಿಯನ್ನೂ ಕಲಿಸಿಕೊಡುತ್ತಾರೆ. ಒಳ್ಳೆಯ ಉದ್ಯೋಗ ಲಭಿಸಲು ಕಾರಣರಾಗುತ್ತಾರೆ. ಅದೇ ತಂದೆ ತಾಯಿಯರು ವೃದ್ಧರಾಗುವಾಗ ಮಕ್ಕಳು ಅವರು ತಮಗಾಗಿ ಸಹಿಸಿದ ಕಷ್ಟ, ತ್ಯಾಗ ಯಾವುದನ್ನೂ ಯೋಚಿಸದೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅವರನ್ನು ನೋಡಿಕೊಳ್ಳಲು ತಮಗೆ ಸಮಯವಿಲ್ಲವೆಂದು ಕಾರಣ ಹೇಳುತ್ತಾರೆ. ತಂದೆ ತಾಯಿಯ ಯೋಗಕ್ಷೇಮ ವಿಚಾರಿಸಲೂ ಬರುವುದಿಲ್ಲ. ಜೀವನದ ಅಂತಿಮ ಕ್ಷಣಗಳನ್ನು ಅನಾಥರಂತೆ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ಅವರ ಅಂತ್ಯಸಂಸ್ಕಾರವನ್ನೂ ವೃದ್ಧಾಶ್ರಮದವರೇ ನಡೆಸಬೇಕಾಗಬಹುದು. ಹಣಕ್ಕೆ ಬೆಲೆ ಕಟ್ಟುವವರು ಸಂಬಂಧದ ಬೆಲೆಯನ್ನು ಅರಿಯಲಾರರು. ನಮ್ಮ ಬದುಕಿನ ಶಿಲ್ಪಿಗಳನ್ನು ಯಾವುದೇ ಕಾರಣಕ್ಕೂ ಹೀಗೆ ದೂರ ಮಾಡಬಾರದು. ಅವರ ವೃದ್ಧಾಪ್ಯ ಕಾಲದಲ್ಲಿ ಮಕ್ಕಳೇ ಅವರನ್ನು ನೋಡಿಕೊಳ್ಳುವಂತಾದರೆ ಅವರ ಜೀವನವು ಸಾರ್ಥಕವಾಗುವುದರೊಂದಿಗೆ ವೃದ್ಧಾಶ್ರಮಗಳು ಕಡಿಮೆಯಾಗಬಹುದು.

ನಯನ ಪಿ
9 ಕನ್ನಡ ജി.എച്ച്.എസ്. എസ്. ബന്തടുക്ക
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Latheefkp തീയ്യതി: 01/ 02/ 2022 >> രചനാവിഭാഗം - ലേഖനം