എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്/2024-25

Schoolwiki സംരംഭത്തിൽ നിന്ന്

School Level Election

ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದ ವಿದ್ಯಾರ್ಥಿಗಳಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದಕ್ಕಾಗಿ ವಿದ್ಯಾರ್ಥಿ ಸಂಸತ್ ಚುನಾವಣೆ ಗುರುವಾರ ನಡೆಸಲಾಯಿತು. ಚುನಾವಣೆ ಅಧಿಸೂಚನೆಯ ಮೂಲಕ ಆರಂಭವದ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರ ನಡೆದು ಬಳಿಕ ಚುನಾವಣೆಯ ದಿನ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಶಿಸ್ತುಬದ್ದವಾಗಿ ಸರತಿ ಸಾಲಿನಲ್ಲಿ ಬಂದು ತಮ್ಮ ಗುರುತು ತಿಳಿಸಿ ಮತವನ್ನು  ಚಲಾಯಿಸಿದರು. ಚುನಾವಣಾ ವೀಕ್ಷಕರಾಗಿದ್ದ ಶಿಕ್ಷಕರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಿ ನಂತರ ಮತದಾನಕ್ಕೆ ಅವಕಾಶ ಮಾಡಕೊಡಲಾಯಿತು. ವಿದ್ಯಾರ್ಥಿಗಳು ಪ್ರತ್ಯೇಕ ಸರದಿಯಲ್ಲಿ ನಿಂತು ಶಾಲಾ ಗುರುತಿನ ಚೀಟಿ ಹಿಡಿದು ಮತದಾನದ ಹಕ್ಕು ಚಲಾಯಿಸಿದರು. 675 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಡಗೈ ತೋರು ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಮತದಾನ ಮಾಡಿದರು.ಶಾಲಾ ವಿದ್ಯಾರ್ಥಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಇವಿಯಂ ಮಾದರಿಯ ಯಂತ್ರವನ್ನು ಪರಿಚಯಿಸಲಾಗಿತ್ತು. ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ನೂತನ್ ಎಡಕ್ಕಾನ ಉಪನಾಯಕಿಯಾಗಿ 10ನೇ ತರಗತಿಯ ಡಾನಿಕಾ ಪಹಲ್ ಆಯ್ಕೆಯಾದರು.


Freedom Quiz

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 06/08/24 ನೇ ಮಂಗಳವಾರ ಶಾಲಾ ಮಟ್ಟದ ಫ್ರೀಡಂ ಕ್ವಿಜ್ 2024 ಜರಗಿತು.ಇದರಲ್ಲಿ ಪ್ರಥಮ ಸ್ಥಾನ:ಡಾನಿಕ ಪಹಲ್ ಆರ್.10D ದ್ವಿತೀಯ ಸ್ಥಾನ:ಚಿರಾಗ್ - 8D ತೃತೀಯ ಸ್ಥಾನ:ನೂತನ್ ಎಡಕ್ಕಾನ -10C and ಕುಷಿ. ಕೆ - 10 D



Hiroshima Day

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ *ಅಗೋಸ್ಟ್ 06 ಹಿರೋಸಿಮಾ ದಿನ : ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 06/08/24 ನೇ ಮಂಗಳವಾರ ಹಿರೋಸಿಮಾ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಸುನಿತ ಕೆ ಅಗೋಸ್ಟ್ 06 ಹಿರೋಸಿಮಾ ದಿನ ದ ವಿಶೇಷತೆ ಯನ್ನು ಮಕ್ಕಳಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಸಮಾಜವಿಜ್ಞಾನ ಅಧ್ಯಾಪಕರಾದ ಶ್ರೀ ಶಿವಪ್ರಸಾದ್ ಸಿ ಮತ್ತು ಶ್ರೀಮತಿ ವಿಚೇತ ಬಿ ಜತೆಗಿದ್ದರು.



ಕಾರ್ಗಿಲ್ ವಿಜಯೋತ್ಸವ ಆಚರಣೆ

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ.ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. "ನಾವಿಂದು ನಮ್ಮ ಮನೆ ಮನಗಳಲ್ಲಿ ದೇಶ ಪ್ರೇಮ ಬೆಳೆಸಬೇಕು. ಕೇವಲ ಯೋಧರಾಗಿ ಮಾತ್ರ ದೇಶ ಸೇವೆ ಮಾಡುವುದಲ್ಲ ದೇಶದ ಪ್ರತಿಯೊಂದು ಸಂಪತ್ತನ್ನು ಉಳಿಸಿಕೊಂಡು, ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಧನಾಗಿ ಸೇವೆ ಮಾಡುವುದು ಕೂಡಾ ನಮ್ಮ ಹೆಮ್ಮೆ" ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು. ಸಮಾಜ ವಿಜ್ಞಾನ ಅಧ್ಯಾಪಿಕೆ ಶ್ರೀ ಮತಿ ವಿಚೇತ ಬಿ ಕಾರ್ಗಿಲ್ ಹೋರಾಟದ ಅನಿವಾರ್ಯತೆ, ಹೋರಾಟದಲ್ಲಿ ಮಡಿದ ವೀರ ಸೈನಿಕರ ಬಲಿದಾನ, ಕೆಚ್ಚೆದೆಯ ಶೌರ್ಯದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆ ಮೂಡಿಸಿದರು. ಶ್ರೀ ಶಶಿಕುಮಾರ್ ಪಿ, ಶ್ರೀಮತಿ ಸುನಿತಾ ಕೆ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲಾಯಿತು. ರಾಜ್ ಕುಮಾರ್, ಪ್ರದೀಪ್, ದಿನೇಶ್ ಕೆ, ಕೇಶವಪ್ರಸಾದ ಎಡಕ್ಕಾನ ಸಹಕರಿಸಿದರು. ಶಿವಪ್ರಸಾದ್ ಸಿ ಕಾರ್ಯಕ್ರಮವನ್ನು ನೇತೃತ್ವ ವಹಿಸಿದರು. ಶಶಿಧರ್ ಕೆ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ವಂದಿಸಿದರು.


ಸಮಾಜ ವಿಜ್ಞಾನ ಮೇಳ -2024

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ದಿನಾಂಕ 13/08/24 ನೇ ಮಂಗಳವಾರ ಶಾಲಾ ಮಟ್ಟದ ಸಮಾಜ ವಿಜ್ಞಾನ ಮೇಳ -2024 ಜರಗಿತು.

ITEM PLACE NAME CLASS
WORKING MODEL ಪ್ರಥಮ ಸ್ಥಾನ Chethan Edakkana & Thanmay Padmanabha 10C
ದ್ವಿತೀಯ ಸ್ಥಾನ Varshini & Prithvi 8 C
STILL MODEL ಪ್ರಥಮ ಸ್ಥಾನ Prajaktha & Thanvi 9D
ದ್ವಿತೀಯ ಸ್ಥಾನ Raksha K. P & Jnhaneshwari 9 C
ದ್ವಿತೀಯ ಸ್ಥಾನ ಸಿಂಚನ ಲಕ್ಮಿ 10C
ತೃತೀಯ ಸ್ಥಾನ Hithesh C. H & Thanvith K 8C
NEWS READING ಪ್ರಥಮ ಸ್ಥಾನ Samanvitha 8C
ದ್ವಿತೀಯ ಸ್ಥಾನ Lavanya Rai 8D
ತೃತೀಯ ಸ್ಥಾನ CH Keerthi 8C


ಅಕ್ಷರ ಮುಟ್ಟಮ್ ಕ್ವಿಜ್

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 19/08/2024 ನೇ ಸೋಮವಾರ ಶಾಲಾ ಮಟ್ಟದ ದೇಶಾಭಿಮಾನಿ ಅಕ್ಷರ ಮುಟ್ಟಮ್ ಕ್ವಿಜ್ ಸ್ಪರ್ಧೆ ಜರಗಿತು.

ಪ್ರಥಮ ಸ್ಥಾನ :Chirag (8D)
ದ್ವಿತೀಯ ಸ್ಥಾನ:Bhavish S Shetty(8D)