ರೈತರ ಗೆಳೆಯನೆ ಕೊಕ್ಕೊ ಕೋಳಿ
ಬೆಳಗಿನ ಜಾವದಿ ಕೂಗುವ ಕೋಳಿ
ಉದ್ದದ ಗರಿಗಳ ಅಂದದ ಕೋಳಿ
ಕೆಂಪಿನ ಜುಟ್ಟಿನ ಹುಂಜದ ಕೋಳಿ
ನೆಲವನು ಕಾಲಲಿ ಕೆದರುವ ಕೋಳಿ
ಕಾಳನು ಕುಕ್ಕುವ ಕೊಕ್ಕೊ ಕೋಳಿ
ಬೆಳ್ಳಗೆ ಮೊಟ್ಟೆಯ ಕೊಕ್ಕೊ ಕೋಳಿ
ಮೊಟ್ಟೆಯು ಒಡೆಯಲು ಚುಂಚುಂ ಕೋಳಿ
ಚುಂ ಚುಂ ಮರಿಗಳ ಕೊಕ್ಕೊ ಕೋಳಿ
ಅಂಗಳವೆಲ್ಲಾ ಸುತ್ತುವ ಕೋಳಿ
ಗಿಡುಗನ ಸದ್ದಿಗೆ ಅಡಗುವ ಕೋಳಿ
ರೈತರ ಗೆಳೆಯನೆ ಕೊಕ್ಕೊ ಕೋಳಿ