ನನ್ನ ಊರು

 
ಪಯಸ್ವಿನಿ ನದಿ ಹಾಗೂ ತೂಗು ಸೇತುವೆ

ಪಂಜಿಕಲ್ ಎಂಬ ಊರು ಹೊಸದುರ್ಗ ತಾಲೂಕಿನ ದೇಲಂಪಾಡಿ ಗ್ರಾಮ ಪಂಚಾಯಿತಿನ ಭಾಗವಾಗಿದ್ದು ಕೇರಳ ಮತ್ತು ಕರ್ನಾಟಕ ಗಡಿಯ ಸಮೀಪವಿರುವ ಹಚ್ಚ ಹಸಿರಾದ ಸುರಕ್ಷಿತಾರಣ್ಯದ ನಡುವಿನಲ್ಲಿದೆ. ಕಾಸರಗೋಡು-ಸುಳ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿದೆ.

        ಹಚ್ಚ ಹಸುರಾದ ಅರಣ್ಯದ ನಡುವೆ ಹರಿಯುತ್ತಿರುವ ಪಯಸ್ವಿನಿ ನದಿಯು ಈ ಊರಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪಯಸ್ವಿನಿ ನದಿಯು ಈ ಊರಿನ ಕೃಷಿಕರಾದ ಮೂಲನಿವಾಸಿಗಳಿಗೆ ಆಶ್ರಯವಾಗಿದೆ.
       2011ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ಕೇವಲ 9,000 ಮಾತ್ರ. ಇಲ್ಲಿನ ಮೂಲ ನಿವಾಸಿಗಳು ಕನ್ನಡ, ತುಳು, ಮಲಯಾಳಂ ಮಾತೃಭಾಷಿಗಳಾಗಿದ್ದಾರೆ. ಇಲ್ಲಿನ ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು 1952 ರಲ್ಲಿ ಶ್ರೀಯುತ ದೇವರಗುಂಡ ಐತಪ್ಪ ಗೌಡರಿಂದ ಸ್ಧಾಪಿಸಲ್ಪಟ್ಟು ಸು‍ದೀರ್ಘವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಒದಗಿಸುತ್ತಿದೆ.