എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ಕೊರೋನ

Schoolwiki സംരംഭത്തിൽ നിന്ന്
ಕೊರೋನ


ಕೊರೋನಾ ಎಂಬುದು ಒಂದು ಸಾಂಕ್ರಮಿಕ ರೋಗವಾಗಿದೆ. ಇದು ಚೀನಾದ ವ್ರಹಾನ್ ಪ್ರಾಂತ್ಯದಲ್ಲಿ ಆರಂಭಗೊಂಡು, ಇದೀಗ ವಿಶ್ವದಾದ್ಯಂತ ಹೆಮ್ಮಾರಿ ಯಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ ,ಕೊರೋನ ಎಂಬ ರೋಗಕ್ಕೆ ಔಷಧಿ ಸಿಕ್ಕಿಲ್ಲ. ಆದರೆ ಅನೇಕ ಸಂಶೋಧನಕಾರರು ಔಷಧಿ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಮಾರಕ ರೋಗಕ್ಕೆ ಮಾನವನೆ ಕಾರಣ ಎಂಬ ಸಂಶಯ ಒಂದೆಡೆಯಾದರೆ ಪ್ರಕೃತಿಯನ್ನು ನಾಶಗೊಳಿಸಿದ ಕಾರಣಕ್ಕೆ ಸರ್ವಶಕ್ತನಾದ ಭಗವಂತನ ಶಾಪವು ಎಂದು ಅರಿಯೆನು? ಕೇವಲ ಚೀನಾ ಮಾತ್ರವಲ್ಲದೆ ನಮ್ಮ ಭಾರತ ದೇಶಕ್ಕೆ ಮೆಲ್ಲಗೆ ಕಾಲಿಡುತ್ತಿರುವ ಈ ಸಾಂಕ್ರಾಮಿಕ ಕಾಯಿಲೆ ಇಲ್ಲಿಯೂ ಕೂಡ ತನ್ನ ಅಟ್ಟಹಾಸ ಶುರುಮಾಡಿದೆ .ಔಷಧಿ ಲಭ್ಯವಿರದ ಕಾರಣದಿಂದ ಕೆಲವು ಜೀವನಶೈಲಿಯಲ್ಲಿನ ಬದಲಾವಣೆಗಳು ನಮ್ಮನ್ನು ಈ ಕಾಯಿಲೆಯಿಂದ ಕಾಪಾಡ ಬಲ್ಲದು. ಸಾಂಕ್ರಾಮಿಕ ಜಾತಿಗೆ ಸೇರಿದ ವೈರಸ್ ಕೇವಲ ಸಣ್ಣ ಶೀತ ಮತ್ತು ನೆಗಡಿಯಿಂದ ಪ್ರಾರಂಭವಾಗಿ ಶ್ವಾಸಕೋಶಕ್ಕೆ ತೊಂದರೆ ಉಂಟುಮಾಡುವ ವೈರಸ್ ಗಳ ಜಾತಿಗೆ ಸೇರಿದೆ. ವೈರಸ್ಸ್ ಗಳು ಪ್ರಾಣಿಗಳಿಂದ ಮನುಷ್ಯರಿಗೆ ವರ್ಗಾವಣೆ ಗೊಳ್ಳುತ್ತದೆ. ಸಾಂಕ್ರಾಮಿಕ ಕಾಯಿಲೆ ಬರದಂತೆ ತಡೆಯಲು ಕೈಗೊಳ್ಳಬೇಕಾದ ಮೊದಲ ಕ್ರಮ ಎಂದರೆ ಅದು ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸುತ್ತಮುತ್ತಲಿನ ಪರಿಸರದ ಜೊತೆಗೆ ನಾವು (ಮಾನವರು) ಕೂಡ ಸ್ವಚ್ಛವಾಗಿರಬೇಕು .ಹಾಗೆಯೇ ಜನಜಂಗುಳಿ ಪ್ರದೇಶದಿಂದ ದೂರವಿರಬೇಕು .ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು


DEEPAK.P.S
4 - എസ് വി എ യു പി എസ് സ്വർഗ്ഗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - ലേഖനം