എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಶುಚಿತ್ವದ ಮಹತ್ವ

ಶುಚಿತ್ವದ ಮಹತ್ವ
ರಮೇಶನು ಮೂರನೇ ತರಗತಿಯ ಹುಡುಗ. ಅವನು ಕಲಿಯುವುದರಲ್ಲಿ ಬಹಳ ಜಾಣ. ಆದರೆ ಅವನ ತಾಯಿ ಎಷ್ಣೇ ಹೇಳಿದರೂ ತಿನ್ನುವ ಮೊದಲು ಕೈಗಳನ್ನು ತೊಳೆಯುತ್ತಿರಲಿಲ್ಲ.ಹಾಗೂ ಉಗುರುಗಳನ್ನು ಕತ್ತರಿಸುತ್ತಿರಲಿಲ್ಲ. ತನ್ನ ಶುಚಿತ್ವದ ಬಗ್ಗೆ ಬಹಳ ಉದಾಸೀನ ತೋರುತ್ತಿದ್ದ. ಒಂದು ದಿನ ಶಾಲೆಯಲ್ಲಿ ಪಾಠ ನಡೆಯುತ್ತಿರುವಾಗ ಅವನಿಗೆ ಹೊಟ್ಟೆನೋವು ಶುರುವಾಯಿತು. ಆಗ ಅವನ ಅಧ್ಯಾಪಕರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.ಜೊತೆಗೆ ಅಲ್ಲಿಗೆ ಅವನ ಅಮ್ಮ ಕೂಡ ಬಂದರು.ವ್ಯೈದ್ಯರು ಅವನನ್ನು ಪರೀಕ್ಷಿಸಿ ಇದು ಸಾಮಾನ್ಯ ಹೊಟ್ಟೆನೋವು ಭಯಪಡಬೇಡ.ಆದರೆ ಶುಚಿತ್ವದ ಕಡೆಗೆ ಗಮನಹರಿಸಬೇಕು.ಏನೇ ತಿನ್ನುವ ಮೊದಲು ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಹಾಗೂ ಉಗುರುಗಳನ್ನು ವಾರಕ್ಕೊಮ್ಮೆ ಕತ್ತರಿಸಬೇಕು ಎಂದು ಹೇಳಿ ಅವನಿಗೆ ಔಷಧಿಯನ್ನು ಕೊಟ್ಟರು. ಈ ಘಟನೆಯ ನಂತರ ರಮೇಶನು ತನ್ನ ಉದಾಸೀನವನ್ನು ಬಿಟ್ಟು ತನ್ನ ಶುಚಿತ್ವದ ಕಡೆಗೆ ಗಮನಹರಿಸತೊಡಗಿದನು


RAKSHA.K
3 A എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കഥ