ಅಮ್ಮಾ ಅಮ್ಮಾ ನನಗೆರಡು
ಪುಟ್ಟ ರೆಕ್ಕೆಯ ಕಟ್ಟಮ್ಮಾ
ಚಂದ್ರನ ಬಳಿಗೆ ಹಾರಲು
ನೀನು ಅನುಮತಿ ನೀಡಮ್ಮಾ
ಅಲ್ಲಿಗೆ ಹೋಗುವುದೇಗೆ
ಎಂದು ನನಗೂ ಗೊತ್ತಮ್ಮಾ
ಶಾಲೇಲಿ ಟೀಚರ್ ಚಂದ್ರನ
ಕುರಿತು ಹೇಳಿದ್ದಾರಮ್ಮ
ಭಯಪಡಬೇಡ ಬಾರತೀಯ
ಹೆಮ್ಮೆಯ ಪುತ್ರನೂ ನಾನಮ್ಮ
ಇಸ್ರೋವಿಗೆ ನನ್ನ ಕೈಲಾದ
ಸಹಾಯ ಮಾಡಿಬರುವೆನಮ್ಮಾ
ನಾಸಾದ ನೆರವಿದೆ ದೇಶದ
ಜನರ ಹಾರೈಕೆದೆ ವಿದೇಶಗಳ
ಮೆಚ್ಚುಗೆ ಇದೆಯಮ್ಮಾ
ದುಗುಡ ದುಮ್ಮಾನವೇಕಮ್ಮ
ಅಂತರಿಕ್ಷಕ್ಕೆ ಹಾರುವೆ
ಆರ್ಬಿಟರ್ ನೋಡುವೆ
ಲ್ಯಾಂಡರ್ ಹುಡುಕಿ ಆದ
ಚಂದಿರನoಗಳಕ್ಕೆ ಇಳಿಸಿ
ಬಂದುಬಿಡುವೆನಮ್ಮ